ಪ್ರತಿಯೊಬ್ಬ ಪೋಷಕರಿಗೂ ಮಕ್ಕಳ ಮೇಲೆ ಕಾಳಜಿ ಇದ್ದೇ ಇರುತ್ತದೆ. ಅವರಿಗೆ ಒಂದು ಚೂರು ನೋವಾದ್ರು ನಮ್ಮ ಮನಸ್ಸು ತಡೆಯೋದಿಲ್ಲ. ಕಣ್ಣಲ್ಲಿ ಕಣ್ಣಿಟ್ಟು ಮಕ್ಕಳನ್ನು ನೋಡಿಕೊಳ್ಳುತ್ತೇವೆ.
ತುರ್ತು ಪರಿಸ್ಥಿತಿ ಎದುರಾದ ಸಂದರ್ಭದಲ್ಲಿ ನಿಮ್ಮ ಮಗುವನ್ನೇ ಒಬ್ಬರನ್ನೇ ಬಿಟ್ಟು ಹೋಗುತ್ತೀರಿ. ಬೇರ್ಯಾವುದೇ ಆಯ್ಕೆ ನಿಮ್ಮಲ್ಲಿ ಇರೋದಿಲ್ಲ. ಆದರೆ ಮಕ್ಕಳನ್ನು ಒಬ್ಬರನ್ನೇ ಬಿಟ್ಟು ಹೋಗುವಾಗ ನಿಮಗೆ ಚಿಂತೆ ಕಾಡುವುದು ಸಹಜ. ಹಾಗಾದ್ರೆ ಮಗುವನ್ನು ಮನೆಯಲ್ಲಿ ಬಿಟ್ಟು ಹೋಗಬೇಕಾದರೆ ಯಾವ ರೀತಿ ಸಿದ್ಧತೆ ಮಾಡ್ಕೊಬೇಕು ಅನ್ನೋದನ್ನು ತಿಳಿಯೋಣ.
1. ಮಕ್ಕಳ ಬಳಿ ಮೊಬೈಲ್ ಕೊಟ್ಟು ಹೋಗಿರಿ:
ನೀವೇನಾದರೂ ಮನೆಯಲ್ಲಿ ಮಕ್ಕಳನ್ನು ಒಬ್ಬರನ್ನೇ ಬಿಟ್ಟು ಹೋಗುವುದಾದರೆ ಅವರ ಕೈಗೆ ಒಂದು ಫೋನ್ ಕೊಟ್ಟು ಹೋಗುವುದನ್ನು ಮರೀಬೇಡಿ. ಆ ಫೋನ್ ನಲ್ಲಿ ಪೋಷಕರು, ಸಂಬಂಧಿಕರು ಹಾಗೂ ನಂಬಿಕಸ್ಥ ಮನೆ ಪಕ್ಕದವರ ಪೋನ್ ನಂಬರ್ ಹಾಕಿಡಿ. ಯಾಕಂದ್ರೆ ಏನಾದರೂ ಸಮಸ್ಯೆಯಾದರೆ ತಕ್ಷಣ ಅವರು ನಿಮಗೆ ಕಾಲ್ ಮಾಡುವಂತಿರಬೇಕು. ಅಷ್ಟೇ ಅಲ್ಲದೇ, ಯಾವುದಕ್ಕೂ ನಂಬಿಕಸ್ಥ ಅಕ್ಕ-ಪಕ್ಕದವರಿಗೆ ಮಕ್ಕಳು ಮನೆಯಲ್ಲಿ ಒಬ್ಬರೇ ಇರುವ ವಿಚಾರವನ್ನು ತಿಳಿಸಿದ್ದರೆ ಉತ್ತಮ.
2. ಇಡೀ ಹೊತ್ತು ಟಿವಿ ನೋಡದಂತೆ ಎಚ್ಚರಿಸಿ:
ಮನೆಯಲ್ಲಿ ನೀವು ಮಕ್ಕಳನ್ನು ಒಬ್ಬರನ್ನೇ ಬಿಟ್ಟು ಹೋಗುವ ಸಂದರ್ಭದಲ್ಲಿ ಇಡೀ ಹೊತ್ತು ಟಿವಿ ನೋಡದಂತೆ ಎಚ್ಚರಿಸಿ. ಯಾಕಂದ್ರೆ ಮನೆಯಲ್ಲಿ ಅಪ್ಪ- ಅಮ್ಮ ಇಲ್ಲ ಎನ್ನುವ ಖುಷಿಯಲ್ಲಿ ಮಕ್ಕಳು ಇಡೀ ದಿನ ಟಿವಿ ನೋಡುತ್ತಾ, ವಿಡಿಯೋ ಗೇಮ್ ಆಡುತ್ತಾ ಜೊತೆಗೆ ಮೊಬೈಲ್ ನೋಡುತ್ತಾ ಕಾಲ ಕಳೆಯುತ್ತಾರೆ. ಹೀಗಾಗಿ ಅವರಿಗೆ ಕೆಲವೊಂದು ಮನೆ ಕೆಲಸಗಳನ್ನು ಕೊಟ್ಟು ಹೋಗಿ. ಚಿಕ್ಕ-ಪುಟ್ಟ ಮನೆ ಕೆಲಸವನ್ನು ನಾವು ಮನೆಗೆ ಬರೋದ್ರ ಒಳಗಾಗಿ ಸಂಪೂರ್ಣ ಗೊಳಿಸುವುದಕ್ಕೆ ತಿಳಿಸಿ. ಆಗ ಅವರನ್ನು ಇಡೀ ಹೊತ್ತು ಟಿವಿಯಲ್ಲಿ ಮುಳುಗುವುದನ್ನು ತಪ್ಪಿಸಬಹುದು.
3. ಸುರಕ್ಷತೆಗೆ ಮೊದಲ ಆದ್ಯತೆ ನೀಡಿ:
ಮನೆಯಲ್ಲಿ ಮಕ್ಕಳನ್ನು ಬಿಟ್ಟು ಹೋಗುವಾಗ ಅವರಿಗೆ ಯಾವುದೇ ರೀತಿ ಸಮಸ್ಯೆ ಆಗದಂತೆ ಜಾಗೃತೆ ವಹಿಸಬೇಕು. ಅಡುಗೆ ಮನೆ ಕಡೆಗೆ ಹೋಗದಂತೆ ಎಚ್ಚರಿಕೆ ವಹಿಸಿ. ಚಾಕು ಅಥವಾ ಬೇರ್ಯಾವುದೇ ಹರಿತವಾದ ವಸ್ತುಗಳು ಅವರ ಕೈಗೆ ಸಿಗದಂತೆ ನೋಡಿಕೊಳ್ಳಿ. ಹೀಗಾಗಿ ನೀವು ಅಡುಗೆ ಮಾಡಿಟ್ಟು ಅದನ್ನು ಡೈನಿಂಗ್ ಟೇಬಲ್ ಮೇಲೆ ಇಟ್ಟು ಹೋದರೆ ಉತ್ತಮ. ಸಾಧ್ಯವಾದರೆ ಅಡುಗೆ ಕೋಣೆಗೆ ಬೀಗ ಹಾಕಿ ಮನೆಯಿಂದ ಹೊರಡಿ. ಇನ್ನೂ ಕರೆಂಟ್ ಹೋದ್ರೆ ಹೀಗಾಗಿ ಫ್ಲಾಶ್ ಲೈಟ್ ಅವರ ಕೈಗೆ ಸಿಗುವಂತೆ ಇಟ್ಟು ಹೋಗಿ.
4. ಪೋಷಕಾಂಶಯುಕ್ತ ಆಹಾರವನ್ನು ತಯಾರಿಸಿ:
ಇಟ್ಟು ಹೋಗಿ ಮಕ್ಕಳಿಗೆ ಆರೋಗ್ಯಯುತವಾದ ಯಾವುದೇ ಆಹಾರ ಇಷ್ಟ ಆಗೋದಿಲ್ಲ. ಅನಾರೋಗ್ಯಕರ ವಸ್ತುಗಳನ್ನೇ ಅವರು ಇಷ್ಟ ಪಟ್ಟು ತಿನ್ನುತ್ತಾರೆ. ಹೀಗಾಗಿ ನೀವು ಮಕ್ಕಳನ್ನು ಮನೆಯಲ್ಲಿ ಬಿಟ್ಟು ಹೋಗುವಾಗ ಅವರ ಕೈಗೆ ಸಿಗುವ ಹಾಗೆ ಯಾವುದೇ ರೀತಿ ಜ್ಯೂಸ್, ಚಿಪ್ಸ್, ಐಸ್ ಕ್ರೀಮ್ ಇಟ್ಟು ಹೋಗಬೇಡಿ. ಅದರ ಬದಲಾಗಿ ಆರೋಗ್ಯಕರ ಆಹಾರವನ್ನು ತಯಾರಿಸಿ ಅವರ ಕೈಗೆ ಸಿಗೋ ಜಾಗದಲ್ಲಿ ಇಟ್ಟು ಹೋಗಿ. ಮಕ್ಕಳು ಹಸಿವಾದಾಗ ಅದನ್ನೇ ತಿನ್ನಲಿ.
5. ಮನೆ ಬಾಗಿಲು ತೆಗೆಯುವಾಗ ಮುಂಜಾಗೃತೆಯಿಂದ ಇರಲು ಹೇಳಿ:
ಮನೆಯಲ್ಲಿ ಯಾರು ಇಲ್ಲದ ಸಂದರ್ಭದಲ್ಲಿ ಕಿಡಿಗೇಡಿಗಳು ಮನೆಗೆ ನುಗ್ಗಿ ಅಚಾತುರ್ಯ ನಡೆಯುವ ಸಾಧ್ಯತೆಯಿದೆ. ಹೀಗಾಗಿ ದಿನಪೂರ್ತಿ ಮನೆಯ ಬಾಗಿಲನ್ನು ಹಾಕಿರೋದಕ್ಕೆ ತಿಳಿಸಿ. ಒಂದು ವೇಳೆ ಯಾರಾದರೂ ಬಂದಿರೋದು ಗೊತ್ತಾದರೆ ಕಿಟಕಿ ಮೂಲಕ ನೋಡಿ ಮತ್ತೆ ಬಾಗಿಲು ತೆರೆಯುವಂತೆ ತಿಳಿಸಿ. ಮಕ್ಕಳು ಮನೆಯಲ್ಲಿದ್ದಾಗ ನಮ್ಮ ಜಾಗರೂಕತೆಯಲ್ಲಿ ನಾವಿದ್ದರೆ ಒಳ್ಳೆಯದು.
6. ಪರಿಚಯಸ್ಥರನ್ನು ಮಕ್ಕಳೊಂದಿಗೆ ಬಿಟ್ಟು ಹೋಗಿ:
ಮಕ್ಕಳನ್ನು ಮನೆಯಲ್ಲಿ ಬಿಟ್ಟು ಹೋಗಬೇಕಾದರ ಪರಿಸ್ಥಿತಿ ಬಂದರೆ ನಿಮ್ಮ ಸಂಬಂಧಿಕರು ಅಥವಾ ಪರಿಚಯಸ್ಥರು ಲಭ್ಯವಿದ್ದರೆ ಅವರನ್ನು ಮಕ್ಕಳೊಂದಿಗೆ ಬಿಟ್ಟು ಹೋಗುವುದು ಒಳ್ಳೆಯದು. ಆಗ ನಿಮ್ಮ ಮನಸ್ಸಿಗೆ ಒಂದು ರೀತಿ ನೆಮ್ಮದಿ ಇರುತ್ತದೆ. ಯಾರಾದರೊಬ್ಬರು ಮಕ್ಕಳ ಜೊತೆಗೆ ಇದ್ದಾರಲ್ಲ ಅನ್ನೋ ಕಾರಣಕ್ಕೆ ನೀವು ಆರಾಮಾಗಿ ಇರಬಹುದು.
ಮಕ್ಕಳನ್ನು ಮನೆಯಲ್ಲಿ ಬಿಟ್ಟು ಹೋಗಬೇಕಾದರ ಪರಿಸ್ಥಿತಿ ಬಂದರೆ ನಿಮ್ಮ ಸಂಬಂಧಿಕರು ಅಥವಾ ಪರಿಚಯಸ್ಥರು ಲಭ್ಯವಿದ್ದರೆ ಅವರನ್ನು ಮಕ್ಕಳೊಂದಿಗೆ ಬಿಟ್ಟು ಹೋಗುವುದು ಒಳ್ಳೆಯದು. ಆಗ ನಿಮ್ಮ ಮನಸ್ಸಿಗೆ ಒಂದು ರೀತಿ ನೆಮ್ಮದಿ ಇರುತ್ತದೆ. ಯಾರಾದರೊಬ್ಬರು ಮಕ್ಕಳ ಜೊತೆಗೆ ಇದ್ದಾರಲ್ಲ ಅನ್ನೋ ಕಾರಣಕ್ಕೆ ನೀವು ಆರಾಮಾಗಿ ಇರಬಹುದು.